Viswa Katha Kosha - A Compendium of Stories from All the World Over - Edited by Niranjana
Saturday, April 9, 2011
Viswa Katha Kosha - A Compendium of Stories from All the World Over - Edited by Niranjana
Viswa Katha Kosha - A Compendium of Stories from All the World Over - Edited by Niranjana
Saturday, April 2, 2011
Viswa Katha Kosha to be released tomorrow - Thank you Pusthakapreeethi
ಆಹಾ! ವಿಶ್ವ ಕಥಾ ಕೋಶ ಮತ್ತೆ ಕನ್ನಡಿಗರಿಗೆ ಲಭ್ಯವಾಗಲಿದೆ!!!
ಈ ಕಥಾಸಂಕಲನದ ಸಂಕಲನದ ಆಕರ್ಷಣೆ ಇದರ ಸಂಪಾದಕ ನಿರಂಜನ ಎಂಬುದರಲ್ಲಿದೆ. ಅಷ್ಟೇ ಅಲ್ಲ ಇದರ ಎಲ್ಲಾ ಸಂಪುಟಗಳು ನಿರಂಜನ ಅವರ ಪ್ರಾಸ್ತಾವಿಕ ಮಾತುಗಳನ್ನು ಹೊಂದಿದೆ. ಈ ಪ್ರಸ್ತಾವನೆಗಳು ಆ ಸಂಪುಟ ಯಾವ ದೇಶಗಳ ಕತೆಗಳಿಗೆ ಸಂಬಂಧಿಸಿದ್ದೋ ಆ ದೇಶಗಳ ಭೂಗೋಳ, ಇತಿಹಾಸ ಎಲ್ಲಾ ಚುಟಕಾದರೂ ಮಾಹಿತಿ ಭರಿತವಾಗಿವೆ.
ಈ ಮೇಲಿನ ಸಂಪುಟಗಳನ್ನು ಹೊಂದಿರುವ ಈ ವಿಶ್ವ ಕಥಾ ಕೋಶದಲ್ಲಿ ಮೇಲೆ ಪಟ್ಟಿಮಾಡಿದ ಶೀರ್ಷಿಕೆಗಳಡಿಯಲ್ಲಿ ಭಾರತ (ಎರಡು ಸಂಪುಟ – ಧರಣಿ ಮಂಡಲ ಮಧ್ಯದೊಳಗೆ ಕನ್ನಡದ ಕತೆಗಳಾದರೆ ಸುಭಾಷಿಣಿ – ಇತರ ಭಾರತೀಯ ಕತೆಗಳೊಂದಿಗೆ ಭಾರತದ ನೆರೆ ಹೊರೆ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಬರ್ಮಾದ ಕತೆಗಳ ಸಂಗ್ರಹ. ಇವಲ್ಲದೆ, ಆಫ್ರಿಕಾ ಖಂಡ, ವಿಯೆಟ್ನಾಮ್, ಮಂಗೋಲಿಯಾ, ಚೀನ, ಜಪಾನ್, ಕೊರಿಯಾ, ಇಂಗ್ಲಂಡ್, ಹಂಗರಿ, ರುಮಾನಿಯ, ಆಸ್ಟ್ರೇಲಿಯಾ, ನ್ಯುಜಿಲ್ಯಾಂಡ್, ರಷ್ಯ, ಐರ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್, ಜೆಕೊಸ್ಲೋವಾಕಿಯಾ, ಪೋಲೆಂಡ್, ಯಗೋಸ್ಲಾವಿಯಾ, ಅಲ್ಬೇನಿಯಾ, ಬಲ್ಗೇರಿಯಾ, ಅಮೆರಿಕ, ಕೆನಡಾ, ಮೆಕ್ಸಿಕೋ, ಐಸ್ಲ್ಯಾಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್, ಇಟಲಿ, ಆಸ್ಟ್ರೇಲಿಯಾ, ಗ್ರೀಸ್, ಸೈಪ್ರಸ್, ಟರ್ಕಿ, ಹಾಲೆಂಡ್, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಜರ್ಮನಿ, ಸ್ಪೈನ್, ಪೋರ್ತುಗಲ್, ಇಂಡೋನೇಷ್ಯಾ, ಫಿಲಿಪೈನ್ಸ್, ಮಲಯ, ಸಿಂಗಾಪುರ, ಥಾಯ್ ಲ್ಯಾಂಡ್, ಫ್ರಾನ್ಸ್, ಕ್ಯೂಬಾ, ಜಮೇಯಿಕಾ, ಪಶ್ಚಿಮ ಏಷ್ಯಾ, ದಕ್ಷಿಣ ಅಮೇರಿಕಾ ದೇಶಗಳ ಕತೆಗಳು 24 ಸಂಪುಟಗಳಲ್ಲಿ ಓದಬಹುದು. ಕೊನೆಯ ಸಂಪುಟದಲ್ಲಿ ಪ್ರಾಚೀನ ಪಂಚ ಮಹಾಕಾವ್ಯಗಳಿಂದ ಆಯ್ದ ಕತೆಗಳು ಇವೆ.