ಪ್ರಿಯರೆ,
ಕಾಮ್ರೆಡ್ ಬಿ. ವಿ. ಕೆ. ಅವರು ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾಗಿದ್ದು 1960 ರಿಂದ 2010 ರವರೆಗೆ ಅದರ ನಿರ್ದೇಶಕ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸ್ವತಃ ಹಲವಾರು ಶ್ರೇಷ್ಠ ಕೃತಿಗಳನ್ನು ರಚಿಸಿದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ , ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಮುಂತಾದ ಅನೇಕ ಪ್ರತಿಷ್ಠಿತ ಬಹುಮಾನಗಳು ಸಂದಿವೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ , ಕರ್ನಾಟಕ ಏಕೀಕರಣದ ರೂವಾರಿಯೂ, ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡರೂ , ರೈತ - ಕಾರ್ಮಿಕ ವರ್ಗದ ಜನಪ್ರಿಯ
ನೇತಾರರೂ ಆಗಿದ್ದ ಕಾಮ್ರೆಡ್ ಬಿ. ವಿ. ಕಕ್ಕಿಲ್ಲಾಯರು ಕಳೆದ ಸೋಮವಾರ (04 .06 .2012 )
ತಮ್ಮ 93 ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ.
ಕಾಮ್ರೆಡ್ ಬಿ. ವಿ. ಕೆ. ಅವರು ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾಗಿದ್ದು 1960 ರಿಂದ 2010 ರವರೆಗೆ ಅದರ ನಿರ್ದೇಶಕ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸ್ವತಃ ಹಲವಾರು ಶ್ರೇಷ್ಠ ಕೃತಿಗಳನ್ನು ರಚಿಸಿದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ , ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಮುಂತಾದ ಅನೇಕ ಪ್ರತಿಷ್ಠಿತ ಬಹುಮಾನಗಳು ಸಂದಿವೆ.
ಕಾಮ್ರೆಡ್ ಕಕ್ಕಿಲ್ಲಾಯರ ಗೌರವಾರ್ಥ ದಿನಾಂಕ 16 .06 .2012 ರ ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ಸಂತಾಪ ಸೂಚಕ ಸಭೆಯನ್ನು ಏರ್ಪಡಿಸಿದ್ದೇವೆ . ವಿವರಗಳುಳ್ಳ ಪತ್ರವನ್ನು ಲಗತ್ತಿಸಿದ್ದೇವೆ. ದಯವಿಟ್ಟು ಬನ್ನಿ , ಕಾರ್ಯಕ್ರಮದಲ್ಲಿ ಭಾಗವಹಿಸಿ.
ಈ ಅಂಚೆ ಮತ್ತು ಲಗತ್ತಿಸಿದ ಪತ್ರವನ್ನು ನಿಮ್ಮ ಸ್ನೇಹಿತರಿಗೂ ಆಸಕ್ತರಿಗೂ ರವಾನಿಸಬೇಕಾಗಿ ವಿನಂತಿ .